ಒಟ್ಟಾವ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿಗೆ ಕೋವಿಡ್-19 ದೃಢಪಟ್ಟಿದೆ ಎಂದು ಅವರ ಕಚೇರಿ ಗುರುವಾರ ತಡವಾಗಿ ತಿಳಿಸಿದೆ.

ಸೋಫಿ ಗ್ರೆಗೊರಿಟ್ರುಡೊಅವರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಪ್ರಧಾನಮಂತ್ರಿ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

'ವೈದ್ಯಕೀಯ ಸಲಹೆ ಮೇರೆಗೆ ಅವರು ಸದ್ಯಕ್ಕೆ ಪ್ರತ್ಯೇಕವಾಗಿರುತ್ತಾರೆ. ಅವರು ಚೆನ್ನಾಗಿಯೇ ಇದ್ದಾರೆ. ವೈದ್ಯರು ಶಿಫಾರಸು ಮಾಡಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಮತ್ತು ಸೋಂಕು ಪೀಡಿತ ಲಕ್ಷಣಗಳು ಮಂದಗತಿಯಲ್ಲಿವೆ ಎಂದು ಹೇಳಿದೆ.

ಇದನ್ನೂ ಓದಿ:ಹಾಲಿವುಡ್ ದಿಗ್ಗಜ ಟಾಮ್ಹಂಕ್ಸ್ಗೆ ಕೋವಿಡ್ ತಗುಲಿದ್ದು ಕೇಳಿ ಟ್ವಿಟರ್ ಲೋಕ ಮರುಕ

'ಪ್ರಧಾನಮಂತ್ರಿಯವರಲ್ಲಿರೋಗದ ಯಾವುದೇ ಗುಣಲಕ್ಷಣ ಕಂಡುಬಂದಿಲ್ಲ. ಅವರು ಆರೋಗ್ಯವಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ವೈದ್ಯರ ಸಲಹೆ ಮೇರೆಗೆ ಅವರು 14 ದಿನಗಳು ಪತ್ನಿಯಿಂದ ದೂರವಿರುವುದಾಗಿಯೂ ಪ್ರಕಟಿಸಿದ್ದಾರೆ. ಆದರೆ ಪರೀಕ್ಷೆಗೆ ಒಳಗಾಗುವುದಿಲ್ಲ.''ಪ್ರಧಾನಮಂತ್ರಿಗಳು ತಮ್ಮ ಕರ್ತವ್ಯವನ್ನು ಸಂಪೂರ್ಣವಾಗಿ ಮುಂದುವರಿಸುತ್ತಾರೆ ಮತ್ತು ನಾಳೆ ಕೆನಡಿಯನ್ನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.' ಎಂದು ತಿಳಿಸಿದೆ.

ಟ್ರೂಡೊ ಮತ್ತು ಅವರ ಪತ್ನಿ ಬುಧವಾರ ಬ್ರಿಟನ್‌ನಿಂದ ಹಿಂತಿರುಗಿದಾಗಿನಿಂದ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈ ವೇಳೆ ಪತ್ನಿಯು ಕೊರೊನಾ ವೈರಸ್ ಸೋಂಕು ಪರೀಕ್ಷೆಗೆ ಒಳಗಾದ ಬಳಿಕ ಸ್ವಯಂ ಆಗಿ ಪರಸ್ಪರ ದೂರವಿರುವುದಾಗಿ ಗುರುವಾರವೇ ಘೋಷಿಸಿದ್ದರು.

ಬ್ರಿಟನ್‌ನಿಂದ ಹಿಂದಿರುಗಿದ ನಂತರ ಸೋಫಿ ಗ್ರೆಗೊರಿಟ್ರುಡೊ ಅವರಿಗೆ, ' ತಡರಾತ್ರಿಯೇ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಕೂಡಲೇ ಅವರು ವೈದ್ಯಕೀಯ ಸಲಹೆ ಮತ್ತು ಪರೀಕ್ಷೆಗೆ ಒಳಗಾಗಿದ್ದರು ಎಂದು ಮೊದಲ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.